ನನ್ನ ಪ್ರಯತ್ನಕ್ಕೆ ಇಷ್ಟೊಂದು ಪ್ರೋತ್ಸಾಹ ದೊರಕ್ಕುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ನನ್ನ ನುಡಿಮುತ್ತುಗಳು ಬ್ಲಾಗ್ ಕಳೆದ ನವೆಂಬರ್ ತಿಂಗಳಲ್ಲಿ ಹದಿನಾರು ಸಾವಿರ ಬಾರಿ ವೀಕ್ಷಣೆಯಾಗಿತ್ತು. ಈಗ ಕೇವಲ ಎರಡುವರೆ ತಿಂಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಇದರೊಂದಿಗೆ ಒಟ್ಟು 20,000 ಬಾರಿ ವೀಕ್ಷಣೆಯಾಗಿದೆ. ಪ್ರತಿಯೊಬ್ಬರ ಜೀವನಕ್ಕೆ ಅವಶ್ಯಕವಾಗಿರುವ ಆದರ್ಶ ವ್ಯಕ್ತಿಗಳ ಮಾತುಗಳು ತುಂಬಾ ಅವಶ್ಯಕ. ಇವುಗಳ ವ್ಯಕ್ತಿಗಳ ಗುರಿಯೆಡೆಗೆ ತಲುಪಿಸುವಲ್ಲಿ ಸಹಕಾರಿಯಾಗಿವೆ. ಕನ್ನಡದಲ್ಲಿ ನುಡಿಮುತ್ತುಗಳ ಸಂಗ್ರಹದ ಕೆಲಸಕ್ಕೆ ಮನ್ನಣೆ ದೊರೆತು, ಈ ತರಹದ ಕನ್ನಡದ ಬ್ಲಾಗ್ ಗಳನ್ನು ಪ್ರೋತ್ಸಾಹಿಸಿರುವುದಕ್ಕೆ ತುಂಬಾ ಋಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಕೆಲಸಗಳನ್ನು ಮುಂದುವರಿಸುತ್ತೇನೆ. ಎಲ್ಲಾ ಕನ್ನಡಾಭಿಮಾನಿಗಳಿಗೆ ವಂದನೆಗಳು.
ನುಡಿಮುತ್ತುಗಳು ಬ್ಲಾಗ್ 2009 ಜೂನ್ ತಿಂಗಳಲ್ಲಿ ಪ್ರಾರಂಭವಾಯಿತು. ನಂತರ ತನ್ನ ವಿಸ್ತಾರತೆಯನ್ನು ಬೆಳಸಿಕೊಂಡು ಓದುಗರ ಸಂಖ್ಯೆಯನ್ನು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ಈ ದಿನದ ಪ್ರಕಾರ ನನ್ನ ಬ್ಲಾಗಿನ ಅಂಕಿಅಂಶ ಈ ಕೆಳಕಂಡತ್ತಿದೆ.
|
ಕನ್ನಡ ಬಳಸಿ - ಕನ್ನಡ ಉಳಿಸಿ
ಇಂತಿ ನಿಮ್ಮವ,
ಮಂಜುನಾಥ್.ಎಂ.ಕೆ
ಮಂಜುರವರೇ ನಿಮ್ಮ ನುಡಿಮುತ್ತುಗಳು ಬ್ಲಾಗ್ ತುಂಬಾ ಪ್ರಯೋಜನಕಾರಿಯಾಗಿದೆ. ಈ ನಿಮ್ಮ ಬ್ಲಾಗ್ 20 ಸಾವಿರಕ್ಕೂ ಹೆಚ್ಚಿನ ಬಾರಿ ವೀಕ್ಷಣೆಯಾಗಿರುವುದು ಉತ್ತಮವಾದ ಕನ್ನಡದ ಕೆಲಸಕ್ಕೆ ಸಿಕ್ಕ ಪ್ರತಿಫಲವಾಗಿದೆ. ಮಹಾನ್ ವ್ಯಕ್ತಿಗಳ ನುಡಿಮುತ್ತುಗಳ ಸಂಗ್ರಹಕ್ಕೆ ಧನ್ಯವಾದಗಳು. ಪ್ರತಿಯೊಬ್ಬರಿಗೂ ಈ ನುಡಿಮುತ್ತುಗಳು ದಾರಿದೀಪವಾಗುತ್ತವೆ. ಹೀಗೆ ಸಂಗ್ರಹ ಕಾರ್ಯ ಮುಂದುವರಿಸಿ.
ಪ್ರತ್ಯುತ್ತರಅಳಿಸುಇಂತಿ,
ರಾಘವ್ ಎಸ್.ಕೆ,
ಮಂಗಳೂರು.